ಶಹಾಬಾದ ಕಾಮ್ರೇಡ್ ಶಿವದಾಸ್ ಘೋಷ್ ರವರ 49ನೇ ಸ್ಮರಣ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದ ಎಸ್’ಯುಸಿಐ (ಸಿ) ಪಕ್ಷದ ಕಚೇರಿಯಲ್ಲಿ ಈ ಯುಗದ ಓರ್ವ ಮಾರ್ಕ್ಸ್ ವಾದಿ ಚಿಂತಕರು ಹಾಗೂ ಎಸ್’ಯುಸಿಐ (ಸಿ) ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಶಿವದಾಸ್ ಘೋಷ್ ರವರ 49ನೇ ಸ್ಮರಣ ದಿನಾಚರಣೆಯ ನಿಮಿತ್ತ ಪಕ್ಷದ ತಾಲೂಕು ಕಾರ್ಯದರ್ಶಿ ಕಾಂ. ಗಣಪತ್ ರಾವ್ ಮಾನೆ ಧ್ವಜಾರೋಹಣ ನೆರವೇರಿಸಿದರು.
ಕಚೇರಿ ಕಾರ್ಯದರ್ಶಿ ಭಾಗಣ್ಣ ಬುಕ್ಕಾ, ಕಾ. ರಾಘವೇಂದ್ರ ಎಂ.ಜಿ, ಗುಂಡಮ್ಮ ಮಡಿವಾಳ ಸೇರಿದಂತೆ ಪಕ್ಷದ ಸದಸ್ಯರು, ಬೆಂಬಲಿಗರು ಭಾಗವಹಿಸಿದ್ದರು. ಜಗನ್ನಾಥ ಎಸ್.ಎಚ್ ನಿರೂಪಿಸಿದರು.
ನಂತರ ಸಂಜೆ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಭೆಗೆ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾಮ್ರೇಡ್ ಎನ್. ರಾಜಶೇಖರ ಅವರು ಹಾಗೂ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ ರವರು ಆಗಮಿಸಿದ್ದರು.
