ಅರಿಕೇರಾ.ಕೆ ಬಸವನ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಭಾರತದ ಮನೆಗಳನ್ನು ಡಿಜಿಟಲ್ ಸಬಲೀಕರಣಗೊಂಡ ಸಮಾಜವಾಗಿ ಪರಿವರ್ತಿಸುವ ದೃಷ್ಟಿಕೋನದೊಂದಿಗೆ ನಮ್ಮ ಸಂಸ್ಥೆಯು ಡಿಜಿಟಲ್ ಇಂಡಿಯಾದ ಧ್ಯೇಯವನ್ನು ಹೊಂದಿದೆ ಎಂದು ಸಂಸ್ಥೆಯ ರಾಜ್ಯ ಕಾರ್ಯನಿರ್ವಾಹಕ ಮ್ಯಾನೇಜರ್ ಡಾ.ಸಚಿನ್ ಟಿ ಪವಾರ್ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ಅರಿಕೇರಾ.ಕೆ ಬಸವನ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಂಟ್ರಲ್ ಕಮರ್ಷಿಯಲ್ ಇಂಡಸ್ಟ್ರೀ ಆಫ್ ಇಂಡಿಯಾ ಸಿಟಿ ವತಿಯಿಂದ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ ವಿತರಿಸಿ ಅವರು ಮಾತನಾಡಿದರು.

ಯಾದಗಿರಿ ತಾಲೂಕಿನಲ್ಲಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದ್ದು, ಅತೀ ಹಿಂದುಳಿದ ತಾಂಡಾಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಸಂಸ್ಥೆಯ ವತಿಯಿಂದ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಬಂಗಾರೆಪ್ಪ, ಅತಿಥಿ ಶಿಕ್ಷಕರಾದ ಚಂದ್ರಕಾಂತ, ಸಿದ್ದಪ್ಪ, ಶಿಕ್ಷಕಿ ಮಂಜುಳಾ, ಸಂಸ್ಥೆಯ ಸಿಬ್ಬಂದಿಗಳಾದ ಅರವಿಂದ ಪವಾರ, ಮಧುಕೃಷ್ಣ, ಶರಣಗೌಡ ಪಾಟೀಲ, ಸಚಿನ,ಪಾಪಾ ಪವಾರ, ಅರ್ಜುನ್, ಸಮೀನಾ ಪಠಾಣ್, ಎಮ್.ಡಿ ಮಹಿಬೂಬ, ವಿಶ್ವರಾಧ್ಯ ಸಾಗರ್, ನಾಗೇಂದ್ರ ಎಮ್, ಚಂದಪ್ಪ ಬಂದಳ್ಳಿ, ಅಲ್ದಿಪ್ ಪವಾರ್, ಗುಂಡಪ್ಪ, ಪಂಡಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!