Oplus_0

ವಿಜಯ್ ರೆಡ್ಡಿ ಯರಗಲ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಪಾಂಡಿಚೇರಿಯ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯದ ವತಿಯಿಂದ ವಿಜಯ ರೆಡ್ಡಿ ಯರಗಲ್ ಅವರಿಗೆ ಸಮುದಾಯ ಔಷಧಾಲಯ ವಿಭಾಗದಲ್ಲಿ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ವಿಜಯ ರೆಡ್ಡಿ ಯರಗಲ್ ಅವರ ಅತ್ಯುತ್ತಮ ಕೊಡುಗೆಗಳು ಮತ್ತು ಸಾಧನೆಗಳನ್ನು ಗುರುತಿಸಿ, ಅ.11 ರಂದು ಪಾಂಡಿಚೇರಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಸಂದರ್ಭದಲ್ಲಿ ಸಮುದಾಯ ಔಷಧಾಲಯ ವಿಭಾಗದಲ್ಲಿ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಚೇರಮನ್ ಡಾ. ಪಿ. ಮ್ಯಾನುಯೆಲ್ ತಿಳಿಸಿದ್ದಾರೆ.

ಗೌರವ ಡಾಕ್ಟರೇಟ್ ಪದವಿ ಲಭಿಸಿದ್ದಕ್ಕೆ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಯರಗಲ್, ಬಂದಯ್ಯ ಸ್ವಾಮಿ, ಈಶಯ್ಯಾ ಸ್ವಾಮಿ, ಜಗನ್ನಾಥ ರೆಡ್ಡಿ ಪೊಲೀಸ್ ಪಾಟೀಲ, ವೆಂಕಟ್ ರೆಡ್ಡಿ ಪೊಲೀಸ್ ಪಾಟೀಲ, ಬಸ್ಸುಗೌಡ ಪೊಲೀಸ್ ಪಾಟೀಲ, ಅಮೀನ್ ರೆಡ್ಡಿ ಪೊಲೀಸ್ ಪಾಟೀಲ ಸೇರಿದಂತೆ ಯರಗಲ್ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ

ವಿಜಯ ರೆಡ್ಡಿ ಯರಗಲ್ ಸೇವೆ: 

ಸಮುದಾಯ ಔಷಧಾಲಯದ 24/7 ಸೇವೆಯಲ್ಲಿ 23 ವರ್ಷಗಳ ಅನುಭವ ಇರುವ ವಿಜಯ್ ರೆಡ್ಡಿ ಅವರು, ಉಚಿತ ಔಷಧಿ ವಿತರಣೆಯೊಂದಿಗೆ ವಿವಿಧ ಉಚಿತ ಆರೋಗ್ಯ ಶಿಬಿರಗಳನ್ನು ಹಾಗೂ 5 ಬಾರಿ ರಕ್ತ ತಪಾಸಣಾ ಶಿಬಿರಗಳನ್ನು ನಡೆಸಿದ್ದಾರೆ, ದೈನಂದಿನ ಉಚಿತ ರಕ್ತದೊತ್ತಡ ತಪಾಸಣೆ, ರಕ್ತದಲ್ಲಿನ ಸಕ್ಕರೆ ತಪಾಸಣೆ ಮತ್ತು ತೂಕ ತಪಾಸಣೆ ಸೇವೆಗಳು ದಿನನಿತ್ಯ ಸರಾಸರಿ 500± ರೋಗಿಗಳಿಗೆ ಸೇವೆ ಸಲ್ಲಿಸುವ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ಒದಗಿಸಿದ್ದಾರೆ ಇವರ ಸೇವೆಗೆ 2018 ರಲ್ಲಿ ಕಲ್ಯಾಣ ಕರ್ನಾಟಕ ಸಾಧಕರ ಪ್ರಶಸ್ತಿ ಲಭಿಸಿತ್ತು ಪ್ರಸ್ತುತ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.

Spread the love

Leave a Reply

Your email address will not be published. Required fields are marked *

error: Content is protected !!