ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿ: ಅನಿಲ್ ಕರಾಟೆ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಬದಲಾವಣೆ ಮಾಡುವಂತೆ ಬಿಜೆಪಿ ಮುಖಂಡ ಅನಿಲ್ ಕರಾಟೆ ಒತ್ತಾಯಿಸಿದ್ದಾರೆ.
ಗುರುವಾರ ನಗರಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಅವರಿಗೆ ದೂರಲಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅವರು ಒತ್ತಾಯಿಸಿದ್ದಾರೆ.
ಜಿಲ್ಲಾ ಅಧ್ಯಕ್ಷರು 70 ವರ್ಷ ಮೇಲ್ಪಟ್ಟವರಾಗಿದ್ದು ಅವರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡೋದು ಅವರಿಗೆ ಕಷ್ಟ ಆಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಇರುವುದಿಲ್ಲ ಯಾವ ಹಳೆ ಕಾರ್ಯಕರ್ತರನ್ನು ಯಾವುದೇ ಸಭೆಗೆ ಕರಿಯುತ್ತಿಲ್ಲ ಕಾರ್ಯಕರ್ತರಲ್ಲಿ ಅಸಮಾಧಾನ ಎದ್ದಿದೆ. ಇದರ ಫಲವಾಗಿ ನಮ್ಮ ಪಕ್ಷದ ಮಾಜಿ ನಗರಸಭೆ ಸದಸ್ಯ ಸುರೇಶ ಕೋಟಿಮನಿ ಮತ್ತು ಕೇಂದ್ರ ರೈಲ್ವೆ ನಿಗಮ ಮಾಜಿ ಸದಸ್ಯ ಹಣಮಂತ ಮಡ್ಡಿ ಇಬ್ಬರು ರಾಜೀನಾಮೆಯನ್ನು ಕೊಟ್ಟು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು ಜಿಲ್ಲಾದ್ಯಕ್ಷರಿಂದ ಕಾರ್ಯಕರ್ತರ ನಿರ್ಲಕ್ಷವೇ ಕಾರಣವಾಗಿದೆ ಎಂದು ಆರೋಪಿಸಿದರು.
ಇದು ಹೀಗೆ ಮುಂದುವರೆದರೆ ಪಕ್ಷಾಂತರ ಕಾರ್ಯಕ್ರಮ ಯಾದಗಿರಿ ಜಿಲ್ಲೆಯಲ್ಲಿ ಮುಂದುವರಿಯಲಿದೆ ಹಾಗಾಗಿ ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನು ಬದಲಿಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಅಗ್ರಹಿಸಿದರು.

