Oplus_0

ಚಿತ್ತಾಪುರ ಸಂಗೀತ ಶಿಕ್ಷಕ ಲಕ್ಷ್ಮಣ ಭಜಂತ್ರಿ ನಿವೃತ್ತ ಸಮಾರಂಭ | ಲಕ್ಷ್ಮಣ ಭಜಂತ್ರಿ ನಿಸ್ವಾರ್ಥ ಸೇವೆ ಅನನ್ಯ: ಬಿಇಒ ಬಿರಾದಾರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಂಗೀತ ಶಿಕ್ಷಕ ಲಕ್ಷ್ಮಣ ಭಜಂತ್ರಿ ಅವರು ಸೌಮ್ಯ ಸ್ವಭಾವದವರು ಮತ್ತು ಪ್ರಚಾರದಿಂದ ಸಂಪೂರ್ಣವಾಗಿ ದೂರವಿದ್ದು, ನಿಸ್ವಾರ್ಥವಾಗಿ ಸದ್ದಿಲ್ಲದೇ ಸೇವೆ ಸಲ್ಲಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಬಣ್ಣಿಸಿದರು.

ಸರಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ದೀರ್ಘಕಾಲದವರೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಸಂಗೀತ ಶಿಕ್ಷಕ ಲಕ್ಷ್ಮಣ ಭಜಂತ್ರಿ ಅವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವರ ಕಠಿಣ ತಾಲೀಂನಿಂದ ಪ್ರಾಪ್ತಿಯಾಗುವಂತಹ ಶಾಸ್ತ್ರೀಯ ಸಂಗೀತದ ಆಳವಾದ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದಿದ್ದಾರೆ. ಅಲ್ಲದೆ, ಅವರ ಮಾರ್ಗದರ್ಶನದಲ್ಲಿ ಹಲವಾರು ಸಂಗೀತ ಶಿಕ್ಷಕರನ್ನು ತಯಾರು ಮಾಡಿದ್ದಾರೆ. ಮುಖ್ಯವಾಗಿ, ವಿದ್ಯಾರ್ಥಿಗಳಿಗೆ ಪಾಠಗಳಲ್ಲಿ ಏಕಾಗ್ರತೆ ಲಭಿಸಲು ಸಂಗೀತ ಎಷ್ಟು ಪರಿಣಾಮ ಬೀರುವುದನ್ನು ಮನದಟ್ಟಾಗಿ ಹೇಳಿಕೊಟ್ಟಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಮಾತನಾಡಿ, ಲಕ್ಷ್ಮಣ ಭಜಂತ್ರಿ ಸಂಗೀತ ಶಿಕ್ಷಕರಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಅಪಾರ ಶಿಷ್ಯರನ್ನು ಹೊಂದಿದ್ದಾರೆ. ಸ್ವಭಾವದಲ್ಲಿ ಹಾಗೂ ನಡೆನಡಿಯಲ್ಲೂ ಎಲ್ಲರಿಗೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇವರ ಸೇವೆ ಅಮೋಘವಾಗಿದೆ ಇವರ ನಿವೃತ್ತ ಜೀವನ ಸುಖ ಸಂತೋಷದಿಂದ ಸಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಲಕ್ಷ್ಮಣ ಭಜಂತ್ರಿ ಅವರು ತಮ್ಮ ನಿವೃತ್ತಿಯ ನಂತರದ ಸಂಕಲ್ಪವನ್ನು ವ್ಯಕ್ತಪಡಿಸಿ, ನಿವೃತ್ತಿಯ ನಂತರವೂ ನಾನು ಯಾವುದೇ ಶುಲ್ಕವಿಲ್ಲದೇ ಸಂಗೀತ ಸೇವೆ ಸಲ್ಲಿಸುವುದಾಗಿ ಘೋಷಿಸಿದರು. ಈ ಘೋಷಣೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶಾಲಾ ಮುಖ್ಯ ಗುರು ಮಲ್ಲಿನಾಥ್ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಶಿಕ್ಷಕ ಕಾಶಿರಾಯ ಕಲಾಲ್, ನಿವೃತ್ತ ಶಿಕ್ಷಕರಾದ ಶಂಕರ ಮೊದಲೆ, ವಿಜಯಕುಮಾರ ಲೋಡ್ಡೆನೂರ್, ದೇವಪ್ಪ ನಂದೂರಕರ್ ಮತ್ತು ರೇವಣಸಿದ್ದಪ್ಪ ರೋಣದ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನರಸಪ್ಪ ಚಿನ್ನಾಕಟ್ಟಿ ಅವರು ನಿರೂಪಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ತಮ್ಮ ಪ್ರೀತಿಯ ಗುರುಗಳಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!