Oplus_0

ರಾವೂರ ಬೆಳೆ ಹಾನಿಯಾದ ರೈತರ ಹೊಲಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ಪರಿಶೀಲನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಗಸ್ಟ್ ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಯಾದ ಶಹಾಬಾದ ಮತ್ತು ಚಿತ್ತಾಪುರ ತಾಲೂಕುಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ರವರು ಮಂಗಳವಾರ ಕ್ಷೇತ್ರ ಬೇಟಿ ನೀಡಿ ಪರಿಶೀಲಿಸಿದರು.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಗಸ್ಟ್ ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಅತಿವೃಷ್ಠಿಯಾಗಿ ಬೆಳೆ ಹಾನಿಯಾದ ಚಿತ್ತಾಪುರ ತಾಲೂಕಿನ ವಾಡಿ ಗ್ರಾಮದ ವಿಠಲ ಯಮುನು ರಾಠೋಡ ರವರ ಸರ್ವೆ ನಂಬರ್‌ 42 ರಲ್ಲಿ ಹೆಸರು ಬೆಳೆಯ ಮತ್ತು ಹಲಕಟ್ಟಿ ಗ್ರಾಮದ ಶೇಷಮ್ಮ ನಿಂಗಣ್ಣ ರವರ ಸರ್ವೆ ನಂಬರ್‌ 158/*/1 ರಲ್ಲಿ ಹತ್ತಿ ಬೆಳೆ ಹಾಗೂ ರತ್ನಮ್ಮ ಸಿದ್ದಣ್ಣ ರವರ ಸರ್ವೆ ನಂಬರ್‌ 158/*/2 ರಲ್ಲಿ ತೊಗರಿ ಬೆಳೆಯ ಹಾನಿಯ ಕುರಿತು ಕ್ಷೇತ್ರ ಬೇಟಿ ನೀಡಿ ಪರಿಶೀಲಿಸಿದರು.

ಅದೇ ರಿತಿಯಾಗಿ ಶಹಾಬಾದ ತಾಲೂಕಿನ ರಾವೂರ ಗ್ರಾಮದ ಗುರುನಾಥ ಮಾಣಿಕಪ್ಪ ರವರ ಸರ್ವೆ ನಂಬರ್‌ 16/1 ರಲ್ಲಿ ಉದ್ದು ಬೆಳೆ, ದೇವಿಂದ್ರ ದರ್ಮಣ್ಣ ರವರ ಸರ್ವೆ ನಂಬರ್‌ 17 ರಲ್ಲಿ ತೊಗರಿ ಬೆಳೆ ಮತ್ತು ಹೀರಾಬಾಯಿ ರಾಮಚಂದ್ರ ರವರ ಸರ್ವೆ ನಂಬರ್‌ 185 ರಲ್ಲಿ ತೊಗರಿ ಬೆಳೆಯ ಹಾಗೂ ಮಾಲಗತ್ತಿ ಗ್ರಾಮದ ಸುಂದರ ಮನೋಹರ ರವರ ಸರ್ವೆ ನಂಬರ್‌ 25/1 ರಲ್ಲಿ ಮತ್ತು ಶರಣಪ್ಪ ಕೇಶಪ್ಪ ರವರ ಸರ್ವೆ ನಂಬರ್‌ 25/2 ರಲ್ಲಿ ತೊಗರಿ ಬೆಳೆ ಹಾನಿಯ ಕುರಿತು ಪರಿಶೀಲಿಸಿದರು.

ಚಿತ್ತಾಪುರ ಹಾಗೂ ಶಹಾಬಾದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ತೊಗರಿ, ಹತ್ತಿ, ಹೆಸರು, ಉದ್ದು ಮತ್ತು ಇತರೆ ಬೆಳೆಗಳು ಹಾನಿಯಾಗಿದ್ದು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸೇರಿ ಜಂಟಿ ಸಮೀಕ್ಷೆ ನಡೆಸಿ ಗ್ರಾಮವಾರು, ರೈತರು ಬೆಳೆ ಹಾನಿಯ ಸ್ವಷ್ಟ ವರದಿಯನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಜಂಟಿ ಕೃಷಿ ನಿರ್ದೇಶಕರು, ಕಲಬುರಗಿ, ಸಹಾಯಕ ಆಯುಕ್ತರು ಸೇಡಂ ತಹಶೀಲ್ದಾರರು ಚಿತ್ತಾಪುರ, ತಹಶೀಲ್ದಾರರು ಶಹಾಬಾದ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಹಾಗೂ ಕೃಷಿ ಮತ್ತು ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!