Oplus_0

ಮುತ್ತಗಾ ಅಂಬಿಗರ ಚೌಡಯ್ಯ ಮೂರ್ತಿ ಭಗ್ನ: ಬಾಬುರಾವ್ ಚಿಂಚನಸೂರ್ ರಾಜೀನಾಮೆಗೆ ಆಗ್ರಹ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ  ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಭಗ್ನಗೊಳಿಸಿ ಅವಮಾನಿಸಿದ್ದ ಘಟನೆ ಇಡೀ ಕೋಲಿ ಕಬ್ಬಲಿಗಾ ಸಮಾಜಕ್ಕೆ ನೋವುಂಟು ಮಾಡಿದೆ ಹಾಗೂ ಅನ್ಯಾಯವಾಗಿದೆ ಇಷ್ಟಾದರೂ ಸರ್ಕಾರದ ಮೇಲೆ ಯಾವುದೇ ರೀತಿಯ ಒತ್ತಡ ಹೇರದೇ ನಿರ್ಲಕ್ಷ್ಯ ವಹಿಸಿದ್ದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಕೋಲಿ ಸಮಾಜದ ಮುಖಂಡ ಬಸವರಾಜ ಬೂದಿಹಾಳ ಆಗ್ರಹಿಸಿದ್ದಾರೆ.

ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾಗಿ ಮಾಜಿ ಸಚಿವರಾಗಿ ನೈತಿಕ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ರಾಜೀನಾಮೆ ಕೊಡದೇ, ಸರ್ಕಾರ ಮೇಲೆ ಒತ್ತಡ ಹಾಕದೇ ಇವತ್ತು ನಿಶ್ಚಿಯಂತೆಯಿಂದ ನಿದ್ದೆ ಮಾಡುತ್ತಿರುವ ಬಾಬುರಾವ್ ಚಿಂಚನಸೂ‌ರ್ ಅವರು ಸಮಾಜದ ಸ್ವಾಭಿಮಾನ ಸಮಾಜದ ರಕ್ತ ಅವರಲ್ಲಿ ಏನಾದರೂ ಇದ್ದರೆ ತಕ್ಷಣವೇ ರಾಜೀನಾಮೆ ಕೊಟ್ಟು ಹೋರಾಟಕ್ಕಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!