Oplus_0

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೋಲಿ ಸಮಾಜಕ್ಕೆ ನೀಡಲು ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷದ ಕೋಲಿ ಸಮಾಜದ ಮುಖಂಡರಿಗೆ ನೀಡಬೇಕು ಎಂದು ಕೋಲಿ ಸಮಾಜದ ಮುಖಂಡರಾದ ಬಸವರಾಜ್ ಬೂದಿಹಾಳ, ಸಂತೋಷ್ ತಳವಾರ, ಪ್ರೇಮ್ ಕೋಲಿ, ಡಾ,ಸರ್ದಾರ್ ರಾಯಪ್ಪ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಐದಾರು ಲಕ್ಷ ಮತದಾರರು ಹೊಂದಿದಂತ ಹಾಗೂ ಕಲ್ಯಾಣ ಕರ್ನಾಟಕದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಗೆದ್ದು ಸರ್ಕಾರ ರಚನೆಯಾಗಲು, ಮಂತ್ರಿಗಳಾಗಲು ಕಾರಣಭೂತರಾದಂತಹ ಹಾಗೂ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಜಿ ಅವರಿಗೆ 40 ವರ್ಷಗಳ ಕಾಲ ರಾಜಕೀಯ ಆಶ್ರಯ ನೀಡಿದಂತ ಕೋಲಿ ಸಮಾಜ ಹಾಗೂ ಅವರ ಸುಪುತ್ರ ಪ್ರಿಯಾಂಕ ಖರ್ಗೆ ಯವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಮೂರು ಬಾರಿ ಗೆದ್ದು ಮಂತ್ರಿಯಾಗಲು ಆಶೀರ್ವದಿಸಿದಂತ ಕೋಲಿ / ಕಬ್ಬಲಿಗ ಸಮಾಜದ ಹಿರಿಯ ಮುಖಂಡರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಇದಕ್ಕೆ ಸ್ಪಂದಿಸದೆ ಇದ್ದಲ್ಲಿ ಹಾಗೂ ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಅನೇಕ ನಿಗಮಗಳಿಗೆ ಪಕ್ಷದ ಹಿರಿಯ ಮುಖಂಡರು ಇದ್ದರೂ, ಅಧಿಕಾರ ನೀಡದೆ, ಕೇವಲ ಅವರ ಹಿಂಬಾಲಕರಿಗೆ, ಕೈ ಚೀಲ ಹಾಗೂ ಕಾಲು ಹಿಡಿದವರಿಗೆ, ತಲೆಹಡುಕರಿಗೆ ಅಧಿಕಾರ ನೀಡಿದ್ದು ಇದರಲ್ಲೂ ಕೂಡ ನೀಚ ರಾಜಕೀಯ ಮಾಡಿದರೆ ಬರುವ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!