Oplus_0

ಬಿಜೆಪಿ ಯಿಂದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರ | ದೀನ್ ದಯಾಳ್ ಆದರ್ಶ ಬಿಜೆಪಿ ಕಾರ್ಯಕರ್ತರಿಗೆ ದಾರಿದೀಪ: ತಳವಾರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದೀನ ದಯಾಳ್ ಉಪಾಧ್ಯಾಯ ಅವರ ತ್ಯಾಗ ಪರಿಶ್ರಮದಿಂದ ಬಿಜೆಪಿ ಉದಯಕ್ಕೆ ಹಾಗೂ ಕೇಂದ್ರದಲ್ಲಿ ಮೂರು ಬಾರಿ ಅಧಿಕಾರಕ್ಕೆ ಬರಲು ಕಾರಣವಾಗಿದೆ ಹಾಗೂ ಈಗಿನ ನಮ್ಮ ಬಿಜೆಪಿ ಕಾರ್ಯಕರ್ತರಿಗೂ ಪ್ರೇರಣೆ ಹಾಗೂ ದಾರಿದೀಪವಾಗಿದೆ ಎಂದು ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವಾ ಪಾಕ್ಷಿಕ ಅಡಿ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೀನ್ ದಯಾಳ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಧಾನಿ ಮೋದಿ ಅವರ ಜನ್ಮದಿನವನ್ನು ವಿವಿಧ ಸಾಮಾಜಿಕ ಸೇವೆಗಳನ್ನು ಕೈಗೊಳ್ಳುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಮಾಜಮುಖಿ ಸೇವಾ ಕಾರ್ಯಗಳು ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಕಳೆದ ಸೆ.17 ರಿಂದ ಸೇವಾ ಪಾಕ್ಷಿಕ ಅಡಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಬರುವ ಅ.2 ರವರೆಗೆ ನಿರಂತರ ಸೇವಾ ಕಾರ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮುಖಂಡರಾದ ಸುರೇಶ್ ರಾಠೋಡ, ನಾಗುಬಾಯಿ ಜಿತುರೆ, ನಾಗರಾಜ್ ಹೂಗಾರ, ಶರಣು ಜ್ಯೋತಿ, ಚಂದ್ರಶೇಖರ ಉಟಗೂರ, ಅಕ್ಕಮಹಾದೇವಿ ನಾಗೇಶ್, ಬಸವರಾಜ ಸಂಕನೂರ, ಪ್ರಸಾದ್ ಅವಂಟಿ, ಮಹೇಶ್ ಬಾಳಿ, ರಾಜು ದೊರೆ, ವಿಶ್ವನಾಜ್ ನೆನಕಿ, ಶಿವರಾಮ ಚವ್ಹಾಣ, ಉದಯಕುಮಾರ್ ಸಿಂಪಿ, ತಿಪ್ಪಣ್ಣ ಇವಣಿ, ವಿನೋದ ಚವ್ಹಾಣ, ಯಲ್ಲಪ್ಪ ಪೂಜಾರಿ, ವಿಶ್ವನಾಥ ಅಫಜಲಪುರ, ರಮೇಶ್ ಕಾಳನೂರ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಇಟಗಿ ನಿರೂಪಿಸಿದರು, ಶಾಂತಕುಮಾರ್ ಮಳಖೇಡ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!