ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ | ರೈತಪರ ಹೋರಾಟಕ್ಕೆ ತಾಲೂಕು ಘಟಕ ರಚನೆ: ಮಲ್ಲಣ್ಣಗೌಡ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೂಡಿ ಹಳ್ಳಿ ಚಂದ್ರಶೇಖರ್ ಬಣ) ತಾಲೂಕು ಘಟಕಕ್ಕೆ ಆಯ್ಕೆ ಮಾಡಿದ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ ಪ್ರಮಾಣಪತ್ರವನ್ನು ನೀಡಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಐಲರೆಡ್ಡಿ ಪಾಟೀಲ ಯರಗಲ್ (ಗೌರವಾಧ್ಯಕ್ಷರು), ಶಾಮರಾವ್ ಸಂಗಾವಿ (ಅಧ್ಯಕ್ಷರು) ಹಣಮಂತ ವೆಂಕಟರಮಣ (ಕಾರ್ಯಾಧ್ಯಕ್ಷರು) ಬಸವರಾಜ ಬಿರಾದಾರ ಕದ್ಜರಗಿ (ಪ್ರಧಾನ ಕಾರ್ಯದರ್ಶಿ) ಅರ್ಜುನ್ ಸಾಲಹಳ್ಳಿ, ರಮೇಶ್ ತುಕಾರಾಮ ನಾಯಕ (ಉಪಾಧ್ಯಕ್ಷರು), ನಾಗರಾಜ ಹೂಗಾರ ಮೊಗಲಾ (ಖಜಾಂಚಿ), ಶಂಭುಲಿಂಗ ವಿಶ್ವಕರ್ಮ ಕರದಾಳ (ಕಾರ್ಯದರ್ಶಿ), ಚಂದ್ರಶೇಖರ ಅವಂಟಿ ಸಾತನೂರು (ಸಂಘಟನಾ ಕಾರ್ಯದರ್ಶಿ), ಗುರಣ್ಣ ಹಂದರಕಿ, (ಸಂಚಾಲಕರು), ಮಲ್ಲಿಕಾರ್ಜುನ ಬಡಿಗೇರ್ (ಕಾನೂನು ಘಟಕದ ಅಧ್ಯಕ್ಷರು) ಅವರನ್ನು ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ ಕೆಲ್ಲೂರ, ಕೂಡಿ ಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ ಇಡೀ ರಾಜ್ಯಾದ್ಯಂತ ಬಲಿಷ್ಠ ಮತ್ತು ಹೆಸರುವಾಸಿ ಸಂಘಟನೆಯಾಗಿದೆ, ಹೀಗಾಗಿ ತಾಲೂಕಿನಲ್ಲಿ ಇಲ್ಲಿವರೆಗೆ ಸಂಘಟನೆ ಇರಲಿಲ್ಲ ಇದನ್ನು ಮನಗಂಡು ರೈತಪರ ಹೋರಾಟಕ್ಕೆ ತಾಲೂಕು ಘಟಕ ರಚನೆ ಮಾಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ತಾಲೂಕಿನಲ್ಲಿ ಅತಿವೃಷ್ಟಿಯಿಂದ ರೈತರ ಬದುಕು ಬರ್ಬಾದ್ ಆಗಿದೆ, ಜೀವನ ನಡೆಸುವುದೇ ದುಸ್ತರವಾಗಿದೆ ಹೀಗಾಗಿ ಬರುವ ದಿನಗಳಲ್ಲಿ ರೈತ ಪರವಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ್ ಡಿ.ಪಿ ನಿರೂಪಿಸಿದರು.

