Oplus_0

ಪ್ರವಾಹ ಪೀಡಿತ ಹೊನಗುಂಟಾ ಗ್ರಾಮಕ್ಕೆ ರಾಜ್ಯ ಬಿಜೆಪಿ ನಾಯಕರು ಭೇಟಿ | ಜನರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿ: ಬಿ.ವೈ.ವಿಜಯೇಂದ್ರ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಬಿಜೆಪಿ ರಾಜ್ಯ ನಾಯಕರು ಮಂಗಳವಾರ ಶಹಾಬಾದ ತಾಲೂಕಿನ ಪ್ರವಾಹ ಪೀಡಿತ ಹೊನಗುಂಟಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರ ಕಷ್ಟಗಳನ್ನು ಅಲಿಸಿದರು. ಕಲಬುರಗಿ ಜಿಲ್ಲೆ ಅತಿವೃಷ್ಟಿಯಿಂದ ತತ್ತರಿಸಿ ಹೋಗಿದೆ. ಶಹಾಬಾದ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪ್ರವಾಹ ಪೀಡಿತ ಪ್ರದೇಶದ ಜನರ ಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದೂ ಇಲ್ಲದಂತಾಗಿದೆ ಎಂದು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಉತ್ತರ ಕರ್ನಾಟಕದ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಮಳೆ ಜಾಸ್ತಿಯಾಗಿ ಬಹುತೇಕ ಎಲ್ಲ ಬೆಳೆಗಳು ನೀರು ಪಾಲಾಗಿವೆ, ಕೂಡಲೇ ಸರ್ಕಾರ  ಪರಿಹಾರ ಘೋಷಿಸಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಪ್ರವಾಹದಿಂದ ಹಾನಿಯಾದರೂ ಸಂಬಂಧಿತ ಸಚಿವರು ಭೇಟಿ ನೀಡಿ ಪರಿಶೀಲಿಸದೆ ಇರುವುದು ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ. ಪ್ರವಾಹ ಸಂಕಷ್ಟಗಳಿಗೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.

ರೈತರ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರ ಅವರ ಸಮಸ್ಯೆಗೆ ಸ್ಪಂದಿಸದ ಕಾರಣ ವಿರೋಧ ಪಕ್ಷವಾಗಿ ರೈತರ ಕಷ್ಟವನ್ನು ಕೇಳಲು ನಾವು ಬಂದಿದ್ದೇನೆ, ಸರ್ಕಾರ ಗಾಡನಿದ್ರೆಯಲ್ಲಿದ್ದು, ಅದಕ್ಕೆ ಎಬ್ಬಿಸಬೇಕಿದೆ. ಕಲಬುರಗಿ ಜಿಲ್ಲೆ ಜನರು ಮಳೆ, ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಸರಕಾರ ಕೂಡಲೇ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಮಳೆ, ಪ್ರವಾಹದಿಂದ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ನೋವುಗಳು ಕೇಳೋರೇ  ಇಲ್ಲದಂತಾಗಿದೆ. ನೀವಾದರೂ ನಮ್ಮ ಸಹಾಯಕ್ಕೆ ಬನ್ನಿ ಎಂದು ನಿಂಗಮ್ಮ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿದರು

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಬಸವರಾಜ ಮತ್ತಿಮಡು, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್, ಮಾಜಿ ಸಂಸದ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಸುನೀಲ್ ವಲ್ಯಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಆಶೋಕ ಬಗಲಿ, ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಶರಣಪ್ಪ ತಳವಾರ, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಬೆಣ್ಣೂರಕರ್, ಅಯ್ಯಪ್ಪ ರಾಮತೀರ್ಥ, ಮಲ್ಲಿಕಾರ್ಜುನ ಇಟಗಿ, ಆನಂದ್ ಪಾಟೀಲ್ ನರಿಬೋಳ, ಮಲ್ಲಿಕಾರ್ಜುನ ಇಟಗಿ, ಈಶ್ವರ ಮುಗುಳನಾಗಾಂವ, ಸಂಗಣ್ಣ ಇಜೇರಿ, ನಾಗರಾಜ ಕುಂಬಾರ, ರುದ್ರಮನಿ ಪೂಜಾರಿ, ಜೈ ಪ್ರಕಾಶ್, ಗುಂಡು ಮತ್ತಿಮಡು, ದೇವರಾಜ್ ಬೆಣ್ಣೂರ, ಶಿವರಾಜ್ ನಾಟೀಕಾರ, ನಿಂಗಣ್ಣ ಹುಳಗೋಳಕರ್, ಅರುಣ್ ಪಟ್ಟಣಕರ್, ಶಿವುಕುಮಾರ ಇಂಗಿನಶೆಟ್ಟಿ, ಸಿದ್ರಾಮ ಕುಸಾಳೆ, ದಿನೇಶ್ ಗೌಳಿ, ಮಹಾದೇವ ಗೊಬ್ಬೂರ, ನಂದಾ ಗೂಡೂರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!