Oplus_0

ಭಂಕೂರ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ | ಚನ್ನಪ್ಪಗೌಡ ಪಾಟೀಲ ಅಧ್ಯಕ್ಷ, ಆಕಾಶ ಪವಾರ ಉಪಾಧ್ಯಕ್ಷ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ತಾಲೂಕಿನ ಭಂಕೂರ ಪ್ರಾಥಮಿಕ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚನ್ನಪ್ಪಗೌಡ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಆಕಾಶ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆಯ ನಂತರ ಅವರ ಅಭಿಮಾನಿ ಬಳಗದವರು ಸನ್ಮಾನಿಸಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ನಿರ್ದೇಶಕರಾದ ಜೈಪ್ರಕಾಶ್ ಬಸಲಿಂಗಪ್ಪ ಲಿಂಗಪ್ಪ ಸಿದ್ದರಾಮಪ್ಪ, ರಾಜು ಮಲಿಪಾಟೀಲ್ ಶಂಕರವಾಡಿ, ಶರಣಗೌಡ ಸಾಹೇಬಗೌಡ, ಕಾಳಮ್ಮ ಹಳ್ಳಿ, ಮಲ್ಲಣ್ಣ ಶರಣಪ್ಪ, ಗಂಗಮ್ಮ ಸಿದ್ದಣ್ಣ, ವಿಮಲಾಬಾಯಿ ಗುಂಡಪ್ಪ, ಮಂಜುನಾಥ್ ಸದಾಶಿವ ಉಪಸ್ಥಿತರಿದ್ದರು. ಸಹಕಾರ ಸಂಘದ ಚುನಾವಣೆ ಅಧಿಕಾರಿಗಳಾಗಿ ಆನಂದ್ ಕುಮಾರ ಪೂಜಾರಿ ಮತ್ತು ಸಹಕಾರಿ ಸಂಘದ ಕಾರ್ಯದರ್ಶಿ ಬಸವರಾಜ ಮಳಗಿ ಚುನಾವಣೆ ನಡೆಸಿದರು.

ಬಿಜೆಪಿ ಚಿತ್ತಾಪುರ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮಾಜಿ ಅಧ್ಯಕ್ಷ ನೀಲಕಂಠ ಪಾಟೀಲ, ಮುಖಂಡರಾದ ಶಂಕರಗೌಡ ಪಾಟೀಲ, ಆನಂದ್ ಪಾಟೀಲ್, ಮಲ್ಲಿಕಾರ್ಜುನ ಇಟಗಿ, ಈಶ್ವರ್ ಮುಗಳುನಾಗಾವಿ, ಯಲ್ಲಾಲಿಂಗ ನಾಗೂರ, ಮಲ್ಲಿಕಾರ್ಜುನ ಪಾಟೀಲ ಮಾಲಗತ್ತಿ, ಗೋಪಾಲ ರಾಠೋಡ, ಚಂದು ಚನ್ನೂರ್, ಭೀಮಸಿಂಗ್ ಪವಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!