ಕಲಬುರಗಿ-ವಿಜಯಪುರ ಪಾದಯಾತ್ರೆಗೆ ಜೇವರ್ಗಿಯಲ್ಲಿ ಅದ್ದೂರಿ ಸ್ವಾಗತ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಎಪಿಎಂಸಿ ಅನಧಿಕೃತವಾದ ಕೃಷಿಯೇತರ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕೃಷಿ ಮಾರಾಟ ಇಲಾಖೆಯ ಸಚಿವ ಶಿವಾನಂದ ಪಾಟೀಲ ಅವರ ಮನೆಗೆ ಮುತ್ತಿಗೆ ಹಾಕಿ ನಿರಂತರ ಧರಣಿ ಸತ್ಯಾಗ್ರಹ ಮಾಡಲು ವಿಜಯಪುರಕ್ಕೆ ಹೊರಟ ಎಂ. ಎಸ್ ಪಾಟೀಲ ನರಿಬೋಳ ಅವರ ಪಾದಯಾತ್ರೆ ಜೇವರ್ಗಿ ನಗರಕ್ಕೆ ಮಂಗಳವಾರ ಸ್ವಾಗತಿಸಿ ಸನ್ಮಾನಿಸಿ ಹೋರಾಟಕ್ಕೆ ಜೇವರ್ಗಿ ತಾಲೂಕಿನ ಎಲ್ಲಾ ಜನಪರ, ಕನ್ನಡ ಪರ, ದಲಿತಪರ, ಪ್ರಗತಿಪರ, ಹಿಂದೂಪರ ಸಂಘಟನೆಗಳ ಹೋರಾಟಗಾರರು ಹೋರಾಟಕ್ಕೆ ಬೆಂಬಲಿಸಿ ಹೋರಾಟಗಾರರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಯಿತು.
ಈ ವೇಳೆ ಎಂ.ಎಸ್ ಪಾಟೀಲ ನರಿಬೋಳ ಮಾತನಾಡಿ, ಜೇವರ್ಗಿಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಮುಖಂಡರುಗಳು ಅದ್ದೂರಿಯಾಗಿ ಸ್ವಾಗತಿಸಿ ಹೋರಾಟಕ್ಕೆ ಬಂಬಲಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತಾ, ಎಪಿಎಂಸಿಯಲ್ಲಿ ಅನದಿಕೃತ ಮಳಿಗೆಗಳು ನಿರ್ಮಿಸಿ ಲೂಟಿ ಮಾಡುತ್ತಿರುವ ಲೂಟಿಕೋರರನ್ನು ಸುಮ್ಮನೆ ಬಿಡಬಾರದು ಕ್ರಿಮಿನಲ್ ಕೆಸ್ ದಾಖಲಿಸಬೇಕು, ಲೈಸೆನ್ಸ್ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ವಿಜಯಪುರದ ಕೃಷಿ ಮಾರುಕಟ್ಟೆ ಸಚಿವರ ಮನೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕಲಬುರಗಿ ಮತ್ತು ಜೇವರ್ಗಿ ತಾಲೂಕಿನ ಎಪಿಎಂಸಿ ಆವರಣದಲ್ಲಿ ಕೃಷಿಯೇತರ ಮಳಿಗೆಗಳನ್ನು ತೆರವುಗೊಳಿಸಿ ಅಕ್ರಮದ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೋರಾಟದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ಡಿ ನಾಯಕ, ನಮ್ಮ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಸುಧೀಂದ್ರ ಇಜೇರಿ, ತಾಲೂಕು ಅಧ್ಯಕ್ಷ ಶಿವಲಿಂಗ ಹಳ್ಳಿ, ಜಯ ಕರ್ನಾಟಕ ಕಾರ್ಯಧ್ಯಕ್ಷ ಪರಮೇಶ್ವರ ಬಿರಾಳ, ಸಾಮಾಜಿಕ ಹೋರಾಟಗಾರ ಈಶ್ವರ ಹಿಪ್ಪರಗಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಸಿದ್ದು ಕವಲ್ದಾರ, ಕಾರ್ಯದರ್ಶಿ ಹಣಮಂತ ಕುಳಗೇರಿ, ಶಿವರಾಜ ಎಸ್ ಕರಕಿ, ತಾಲೂಕು ರೈತ ಸಂಘ, ಮಹಾಂತೇಶ ಹಾದಿಮನಿ ಜಯ ಕರ್ನಾಟಕ ಜಿಲ್ಲಾ ವಕ್ತಾರರು, ಶರಬು ಕಲ್ಯಾಣಿ, ಸಾಗರ ನೆಲ್ಲೋಗಿ, ನಿಂಗಣ್ಣ ಚಿಗರಹಳ್ಳಿ, ನಾಗು ಕೆಲ್ಲೂರ, ಮಾಳಪ್ಪ ದೇಸಾಯಿ, ಯಲ್ಲಪ್ಪ ದೊರೆ, ಮೌನೇಶ ನಂದಿಹಳ್ಳಿ, ರಾಜು ಹಳಿಮನಿ, ಸುರೇಶ ವರ್ಚನಳ್ಳಿ, ಶಿವರಾಜ ನಾಟೀಕಾರ ಸೇರಿದಂತೆ ಇನ್ನಿತರರು ಇದ್ದರು.

