ನವರಾತ್ರಿ ಉತ್ಸವ ಹಾಗೂ ಸಂಘ ಶತಾಬ್ದಿ ವರ್ಷ ನಿಮಿತ್ತ ಅ.5 ರಂದು ದುರ್ಗಾ ದೌಡ್ ಶೋಭಾಯಾತ್ರೆ ಹಾಗೂ ದುರ್ಗಾ ವಾಹಿನಿ ಸತ್ಸಂಗ್ ವಾರ್ಷಿಕೋತ್ಸವ ಸಮಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಶ್ವ ಹಿಂದು ಪರಿಷತ್, ಮಾತೃ ಶಕ್ತಿ – ದುರ್ಗಾ ವಾಹಿನಿ ಚಿತ್ತಾಪುರ ಪ್ರಖಂಡ ವತಿಯಿಂದ ನವರಾತ್ರಿ ಉತ್ಸವ ಹಾಗೂ ಸಂಘ ಶತಾಬ್ದಿ ವರ್ಷ ಅಂಗವಾಗಿ ದುರ್ಗಾ ದೌಡ್ ಶೋಭಾಯಾತ್ರೆ ಹಾಗೂ ದುರ್ಗಾ ವಾಹಿನಿ ಸತ್ಸಂಗ್ ವಾರ್ಷಿಕೋತ್ಸವ ಸಮಾರಂಭ ಅ.5 ರಂದು ಬೆಳಿಗ್ಗೆ 10-15 ರಿಂದ ಸಾಯಂಕಾಲ 4 ಗಂಟೆಯವರೆಗೆ, ಬೆಳಿಗ್ಗೆ 10-15ಕ್ಕೆ ಶ್ರೀ ಅಕ್ಕಮಹಾದೇವಿ ದೇವಾಲಯದಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದ ವರೆಗೆ ಯುವತಿಯರು, ಮಾತೆಯರಿಂದ ದುರ್ಗಾ ದೌಡ್ ಶೋಭಾಯಾತ್ರೆ, ನಂತರ ಮಧ್ಯಾಹ್ನ 12-15ಕ್ಕೆ ದುರ್ಗಾ ವಾಹಿನಿ ಸತ್ಸಂಗ್ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ಮಾತೃ ಶಕ್ತಿ – ದುರ್ಗಾ ವಾಹಿನಿಯ ನಿರ್ಮಲಾ ಭಂಗಿ ತಿಳಿಸಿದ್ದಾರೆ.
ಮಧ್ಯಾಹ್ನ 1-30ಕ್ಕೆ ಭೋಜನ ನಂತರ 2-15ಕ್ಕೆ ಯುವತಿಯರಿಂದ ಹಾಗೂ ಮಾತೆಯರಿಂದ ಕಲೆ ಹಾಗೂ ಶೌರ್ಯ ಪ್ರದರ್ಶನ, ಮಧಾಹ್ನ 3-15ಕ್ಕೆ ಯುವತಿಯರಿಂದ ಹಿಡಿದು ಮಾತೆಯರ ವರೆಗೆ ವಿವಿಧ ತಂಡಗಳಲ್ಲಿ ಆಟ ಆಡಿಸುವುದು, ಸಾಯಂಕಾಲ 4 ಗಂಟೆಗೆ ಸಾಮೂಹಿಕ ದಾಂಡಿಯಾ ಕಾರ್ಯಕ್ರಮದ ಹಾಗೂ ಮಾಹಿತಿ ನೀಡಿದ್ದಾರೆ. ಕು. ಪ್ರತಿಕಾ ಶಿವಕುಮಾರ ಗಾರಂಪಳ್ಳಿ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ
ಸೂಗೂರ (ಕೆ) ಶ್ರೀ ಗುರುರುದ್ರಮುನಿಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ. ಚನ್ನರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ದಂಡೋತಿ ಶ್ರೀ ಬಲಭೀಮೇಶ್ವರ ದೇವಾಲಯದ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜೀ ಅವರು ದಿವ್ಯ ಸಾನಿಧ್ಯ ವಹಿಸುವರು, ವಿಶೇಷ ಆಹ್ವಾನಿತರಾಗಿ ಸ್ವಾತಂತ್ರ ಹೋರಾಟಗಾರರ ಪರಿವಾರ ಹಾಗೂ ಸಮಾಜ ಸೇವಕರು ಕಮಲಾಬಾಯಿ ಚಂದ್ರಶೇಖರ ಸಜ್ಜನಶೆಟ್ಟಿ, ವಿ.ಹಿಂ.ಪ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಸೇಡಂ, ಪ್ರಾಂತ ದುರ್ಗಾ ವಾಹಿನಿ ಸಂಯೋಜಕಿ ಸಂಗೀತಾ ಘಟಧ್ವಜ ಪವಾರ, ವಿ.ಹಿಂ.ಪ ಜಿಲ್ಲಾಧ್ಯಕ್ಷ ಪ್ರದೀಪ ಪಾಟೀಲ್ ಹೊಸಳ್ಳಿ, ಕಾರ್ಯದರ್ಶಿ, ಮಹಾದೇವ ಅಂಗಡಿ, ಮಾತೃಶಕ್ತಿ ಪ್ರಮುಖರು ಸುವರ್ಣ ವೀರಣ್ಣ ಶಿಲ್ಪಿ, ದುರ್ಗಾ ವಾಹಿನಿ ಸಂಯೋಜಕಿ ರೇಣುಕಾ ಶಿವರಾಜ ಖಜೂರಿ ಚಿಂಚೋಳಿ, ಶ್ರೀನಿವಾಸ ನಾಗಪ್ಪ ಹಳ್ಳಿ, ವಿ.ಹಿಂ.ಪ ಚಿತ್ತಾಪುರ ಪ್ರಖಂಡ ಶ್ರೀನಿವಾಸ ನಾಗಪ್ಪ ಹಳ್ಳಿ, ಮಾತೃಶಕ್ತಿ ಪ್ರಮುಖರು ಶೀಲಾ ಪದ್ಮಣ್ಣ ದೊಡ್ಡಮನಿ, ದುರ್ಗಾ ವಾಹಿನಿ ಸಂಯೋಜಕಿ ಶೃತಿ ರುದ್ರಪ್ಪ ತಾವರೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.

