ಶೇ.98.5 ರಷ್ಟು ಅಂಕ ಪಡೆದ ಸಾಯಿಪ್ರಸಾದ ಗೊಬ್ಬುರ್ ರಾಜ್ಯಕ್ಕೆ 9ನೇ ಶ್ರೇಣಿ, ಪ್ರೇರಣಾ ಕಾಲೇಜಿಗೆ 2ನೇ ಟಾಪರ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಳೆದ ಗುರುವಾರ ಪ್ರಕಟಗೊಂಡ 2025-26 ನೇ ಸಾಲಿನಪಿಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿತ್ತಾಪುರದ ಸಾಯಿಪ್ರಸಾದ ರವಿಂದ್ರ ಗೊಬ್ಬುರ್ ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಪಡೆಯುವ ಮೂಲಕ ಶೇ.98.5 ರಷ್ಟು ಫಲಿತಾಂಶ ತನ್ನದಾಗಿಸಿಕೊಂಡು ರಾಜ್ಯಕ್ಕೆ 9 ನೇ ರ್ಯಾಂಕ್ ಪಡೆದಿದ್ದಾನೆ.
ಹುಬ್ಬಳ್ಳಿಯ ಕೆಇಎಲ್ ಸಂಸ್ಥೆಯ ಪ್ರೇರಣಾ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಸಾಯಿಪ್ರಸಾದ, ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಎರಡನೇ ಟಾಪರ್ ಆಗಿದ್ದಾನೆ.
ಚಿತ್ತಾಪುರದ ವಿದ್ಯಾನಿಕೇತನ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿರುವ ಸಾಯಿಪ್ರಸಾದ ಆಗಲೂ ಶೇ.98 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದ. ವಿದ್ಯಾರ್ಥಿ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪಾಲಕರು ಸಂಸತ ವ್ಯಕ್ತಪಡಿಸಿದ್ದಾರೆ.

