Oplus_0

ಭಾಗೋಡಿ ಗ್ರಾಮ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ | ವೀರಶೈವ ಲಿಂಗಾಯತ ಶ್ರೇಷ್ಠ ಸಮಾಜ: ಗುರುಮಿಠಕಲ್ ಖಾಸಾಮಠ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಶ್ರೇಷ್ಠ ಸಮಾಜ ವೀರಶೈವ ಲಿಂಗಾಯತ ಸಮಾಜ ಎಂದು ಗುರುಮಿಠಕಲ್-ಭಾಗೋಡಿ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಭಾಗೋಡಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭಾಗೋಡಿ ಗ್ರಾಮ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜವು ಸಂಸ್ಕೃತಿ, ಆಚಾರ, ವಿಚಾರಗಳ ಆಧಾರದ ಮೇಲೆ ರೂಪುಗೊಂಡಿದೆ ಎಂದರು. ಭಾಗೋಡಿ ಗ್ರಾಮದಲ್ಲಿ ಸರ್ವ ಜನಾಂಗದವರನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡುತ್ತಿರುವ ಕಾರ್ಯ ಶ್ಲಾಘನೀಯ, ಇಲ್ಲಿ ಬಸವಣ್ಣನವರ ಸಮಾನತೆ ಕಂಡುಬಂದಿದೆ ಎಂದು ಹೇಳಿದರು.

ಮಹಾಸಭಾದ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ ನಾಲವಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಾಸಭಾವು ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಗ್ಗೂಡಿಸಿ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಶ್ರಮಿಸುತ್ತದೆ ಎಂದು ಹೇಳಿದರು. ಭಾಗೋಡಿ ಗ್ರಾಮದಲ್ಲಿ ಸಮಾಜದ ಪ್ರಗತಿಗೆ ನೂತನ ಪದಾಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ.ಸಿ.ಭಂಕಲಗಿ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾವು ವೀರಶೈವ ಲಿಂಗಾಯತ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಒಂದು ಪ್ರಮುಖ ಸಂಘಟನೆಯಾಗಿದೆ. ಹೀಗಾಗಿ ಚಿತ್ತಾಪುರ ತಾಲೂಕಿನಲ್ಲಿ ಸಂಘಟನೆ ಇನ್ನಷ್ಟು ಭಲ ಪಡಿಸಲು ಎಲ್ಲರೂ ಒಗ್ಗೂಡುವುದು ಅವಶ್ಯಕ ಎಂದರು.

ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಜಗದೀಶ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ್ ನರಬೋಳಿ, ತಾಲೂಕು ಯುವ ಅಧ್ಯಕ್ಷ ಅನೀಲಕುಮಾರ ವಡ್ಡಡಗಿ, ನಗರ ಅಧ್ಯಕ್ಷ ಚಂದ್ರಶೇಖರ ಉಟಗೂರ, ಅತಿಥಿಗಳಾಗಿ ಭಾಗೋಡಿ ಅಧ್ಯಕ್ಷ ಶರಣಬಸಪ್ಪ ಐನಾಪೂರ, ಶಾಂತಕುಮಾರ್ ಹತ್ತಿ ವೇದಿಕೆಯಲ್ಲಿದ್ದರು.

ರಾಯಚೂರ ಕೃಷಿ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಡಾ.ಮಹಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಬಸವರಾಜ ಪಾಟೀಲ ದಳಪತಿ ಸ್ವಾಗತಿಸಿದರು, ಮಾಲಾಶ್ರೀ ಶಿವುಕುಮಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗ್ರಾಮ ಘಟಕದ ಪದಾಧಿಕಾರಿಗಳು:

ಶಿವಕುಮಾರ.ಬಿ.ಕಲಬುರಗಿ (ಅಧ್ಯಕ್ಷರು) ಡಾ.ಬಸವರಾಜ.ವಿ.ಹಂಚನಾಳ, ಶಿವಕುಮಾರ.ಎ.ಅವಂಟಿ, ಸಿದ್ದಮ್ಮ ಬಸವರಾಜ ಹಂಚನಾಳ, ಈಶ್ವರಿ ದೇವಿಂದ ಹಿರಾಪೂರ (ಉಪಾಧ್ಯಕ್ಷರು), ಮಲ್ಲಿಕಾರ್ಜುನ.ಬಿ.ಸಂಕೋಟಿ (ಪ್ರಧಾನ ಕಾರ್ಯದರ್ಶಿ), ಶರಣಬಸಪ್ಪಾ.ವಿ.ಅವಂಟಿ (ಕಾರ್ಯದರ್ಶಿ), ಲಕ್ಷ್ಮಣ.ಎಂ.ಬಡಿಗೇರ (ಸಹ ಕಾರ್ಯದರ್ಶಿ), ಶರಣಪ್ಪ.ಸಿ.ಅವಂಟಿ (ಕೋಶಾಧ್ಯಕ್ಷರು), ಶ್ರೀಮಂತರಾಯ.ಬಿ.ಕಾಬಟ್ಟಿ, ಶಿವರಾಜ.ಎಸ್.ಪಾಟೀಲ ರಾಂಪುರ, ವಿದ್ಯಾವತಿ ಬಸವರಾಜ ಕುಸನೂರ,  ಮಹೇಶ.ಎಸ್.ಐನಾಪೂರ, ಶಾಂತಕುಮಾರ ಕಲಬುರಗಿ, ಚನ್ನವಿರಪ್ಪ.ಎಸ್.ಐನಾಪೂರ, ಮಾಲಾಶ್ರೀ ಶಿವಕುಮಾರ ಕಲಬುರಗಿ, ಶರಣಪ್ಪ.ಎಸ್.ಹೋನಗುಂಟಿ, ಪವನಕುಮಾರ.ಎಸ್.ಮಲ್ಲೇದ, ಜಗದಿಶ.ಬಿ.ಕಲಶೆಟ್ಟಿ, ಚಂದ್ರಕಾಂತ.ವಿ.ಐನಾಪೂರ, ಶಾಂತಯ್ಯ.ಎಂ.ಹಿರೆಮಠ (ಕಾರ್ಯಕಾರಣಿ ಸದಸ್ಯರು)

ಯುವ ಘಟಕದ ಪದಾಧಿಕಾರಿಗಳು: 

ಪುನೀತ ಕುಮಾರ. ಎಸ್ ಐನಾಪೂರ (ಅಧ್ಯಕ್ಷರು), ಶರತ್ ಆರ್. ಪಾಟೀಲ, ವಿಜಯಕುಮಾರ. ಹೆಚ್. ಐನಾಪೂರ (ಉಪಾಧ್ಯಕ್ಷರು), ಅಭಿಶೇಕ್. ಪಿ ಕಲಬುರಗಿ (ಪ್ರಧಾನ ಕಾರ್ಯದರ್ಶಿ), ಶರಣಬಸಪ್ಪಾ ಎಸ್. ಚೆನ್ನಶೆಟ್ಟಿ.(ಕಾರ್ಯದರ್ಶಿ), ರೇವಣಸಿದ್ದಪ್ಪಾ ಹೆಚ್. ಚೌಡುರ್ (ಸಹ ಕಾರ್ಯದರ್ಶಿ), ನಾಗಣ್ಣಗೌಡ ಆರ್. ಪಾಟೀಲ್ (ಕೋಶಾಧ್ಯಕ್ಷರು),

Spread the love

Leave a Reply

Your email address will not be published. Required fields are marked *

error: Content is protected !!