ಚಿತ್ತಾಪುರ ವೆಂಕಟೇಶ್ವರ ನಗರದಲ್ಲಿ ಒಂದು ಮನೆ ಹಾಗೂ ಬೈಕ್ ಕಳ್ಳತನ : ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಣಣದ ವೆಂಕಟೇಶ್ವರ ನಗರದಲ್ಲಿ ಡಿ.30ರ ರಾತ್ರಿ 3 ಗಂಟೆ ಸುಮಾರಿಗೆ ಮನೆ ಕಳ್ಳತನ ಮಾಡಿರುವ ಘಟನೆ ಜರುಗಿದ್ದು, ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ರಮೇಶ ಶರಣಪ್ಪ ಬೋವಿ ಕಾಟಮದೇವರಹಳ್ಳಿಯವರ ಮನೆಯಲ್ಲಿದ್ದ 1 ತೊಲೆ ಬಂಗಾರ, 16 ತೊಲೆ ಬೆಳ್ಳಿ, 1500 ರೂ. ಕಳ್ಳತನವಾಗಿದೆ. ಸುರೇಶ ಸರಾಫ್ ಲಕ್ಷ್ಮಣ ಸರಾಫ್ ಎನ್ನುವವರ ಮನೆಯಲ್ಲಿ ಬಾಡಿಗೆಗೆ ಇದ್ದವರು ಕಳೆದ ಒಂದು ತಿಂಗಳ ಹಿಂದೇಯೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದು, ಬಾಗಿಲಿನ ಕೀಲಿ ಕೈ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಜಗನ್ನಾಥ ಗುತ್ತೇದಾರ, ಚಂದಯ್ಯ ಗುತ್ತೇದಾರ ಎನ್ನುವವರ ಮನೆ ಮುಂದುಗಡೆ ನಿಲ್ಲಿಸಿದ ಪಲ್ಸರ್ ಬೈಕ್ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಸ್’ಐ ಮಂಜುನಾಥ ರೆಡ್ಡಿ, ಸಿದ್ದು ಮಡಿವಾಳ, ಅನೀಲ್ ಕುಮಾರ ರವಿಕುಮಾರ, ಬೆರಳಚ್ಚು ತಜ್ಞರು, ಶ್ವಾನ ದಳದ ಸಿಬ್ಬಂದಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿದರು. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

