ಚಿತ್ತಾಪುರ ರಿಕ್ರಿಯೇಷನ್ ಶಾಲೆಯಲ್ಲಿ ಕೃಷ್ಣಾ ಜನ್ಮಾಷ್ಟಮಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ರಿಕ್ರಿಯೇಷನ್ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕೃಷ್ಣಾ ಜನ್ಮಾಷ್ಟಮಿ ಆಚರಿಸಲಾಯಿತು.
ಶಾಲೆಯ ಪ್ರಭಾರಿ ಮುಖ್ಯ ಗುರು ಗುರುಸಿದ್ದಯ್ಯ ಮಠಪತಿ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಾಸ್ತನ್ ಪಟೇಲ್ ಅನವಾರ, ನಾಗಪ್ಪ ಜಮಾದಾರ, ಸಂಗೀತಾ ಮೇಡಗುದ್ಲಿ, ಸೋಮಶೇಖರ್, ಜಗನ್ನಾಥ ರಾಠೋಡ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

