ಶಹಾಬಾದ ಸರಕಾರಿ ಶಾಲೆಗೆ ಕಳ್ಳರ ಕಾಟ | ಕಂಪ್ಯೂಟರ್ ಖದ್ದೋಯ್ದ ಖದೀಮರು
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದ ಮಧ್ಯ ಭಾಗದಲ್ಲಿರುವ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಹಲವಾರು ಬೀಗದ ಕೈ ಬಳಸಿ ಬೆಲೆ ಬಾಳುವ ಕಂಪ್ಯೂಟರ್ ಗಳನ್ನು ಖದೀಮರು ಖದ್ದೋಯ್ದಿ ಘಟನೆ ಶಿಕ್ಷಕ ವೃಂದ ಬುಧವಾರ ಬೆಳಗ್ಗೆ ಶಾಲೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಶಾಲೆಯ ಮೇಲಿನ ಮತ್ತು ಕೆಳಗಿನ ಕೊಠಡಿಯಲ್ಲಿದ್ದ ಸಾವಿರಾರು ರೂಪಾಯಿಗಳ ಮೌಲ್ಯದ ಕಂಪ್ಯೂಟರ್ ದೋಚಲಾಗಿದೆ ಆದರೆ, ಕೊಠಡಿಯ ಬಾಗಿಲು, ಕಿಟಕಿ ಏನನ್ನೂ ಮುರಿಯದೆ ಕೊಠಡಿಯ ಬೀಗದ ಕೈ ಉಪಯೋಗಿಸಿ ಕಳ್ಳತನ ಮಾಡಿದ ನಂತರ ಮತ್ತೆ ಬೀಗ ಹಾಕಿ ಹೋಗಿರುವುದು ಸಂಶಯಾಸ್ಪದಕ್ಕೆ ಕಾರಣವಾಗಿದೆ.
ತಾಲೂಕಿನ ದಲಿತ ಯುವ ಮುಖಂಡ ಶಂಕರ ಅಳೋಳ್ಳಿ ಅವರು ಬಡವರ ಮಕ್ಕಳ ಕಾವಲಿಗೆ ಹಾಗೂ ರಕ್ಷಣೆಗಾಗಿ 4 ಸಿಸಿ ಕ್ಯಾಮರ್ ಗಳನ್ನು ಈ ಶಾಲೆಗೆ ದೇಣಿಗೆ ನೀಡಿದ್ದರು. ಆದರೆ 2 ಸಿಸಿ ಕ್ಯಾಮರ್ ಅಳವಡಿಸಿ, 2 ಕ್ಯಾಮೆರಾಗಳು ಅಲಮಾರದಲ್ಲಿ ತೆಗೆದಿರಿಸಲಾಗಿತ್ತು, ಆದರೆ ಶಿಕ್ಷಕ ವೃಂದ ಮತ್ತು ಎಸ್ಡಿಎಂಸಿ ಮಧ್ಯೆ ತಿಕ್ಕಾಟದಲ್ಲಿ 2 ಸಿಸಿ ಕ್ಯಾಮೆರಗಳು ಅಳವಡಿಸಿದರು ಕನೇಕ್ಷನ ಮಾತ್ರ ಮಾಡಿರಲಿಲ್ಲ.
ಈ ಶಾಲೆಯಲ್ಲಿ ಹಲವಾರು ಕಂಪ್ಯೂಟರ್ ಕಳುವಾಗಿದ್ದು ಈಗ ಮತ್ತೆ, 2 ಸಿಪಿಯು, 2 ಮಾನಿಟರ್, ಕೀ ಬೋರ್ಡ 1, ಎಮಪ್ರೀಪ್ಲೇಯರ್ 1, ತೂಕದ ಯಂತ್ರ 1, ಈ ಹಿಂದೆ ಯುಪಿಎಸ ನ ಬ್ಯಾಟರಿ, ಸೇರಿದಂತೆ ಹಲವಾರು ಕಂಪ್ಯೂಟರ್ ಗಳು ಇಲ್ಲಿಯವರೆಗೂ ಕಳ್ಳತನವಾಗಿವೆ, ಮುಖ್ಯ ದಾಖಲೆ ಹರಿದು ಹಾಕಿದ್ದು, ಕೆಲವು ಕಾಣೆಯಾಗಿವೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಸಿಪಿಐ ನಟರಾಜ್ ಲಾಡೆ, ಎಫ್ ಎಸ್ ಎಲ್ ತಂಡ ದವರು ಶ್ವಾನ ದಳದ ಜೊತೆಗೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪಿಎಸ್ಐ ಶಾಮರಾಯ, ಪಿಸಿ ಹುಸೇನ ಪಾಷಾ, ಪ್ರಭಾರಿ ಮುಖ್ಯ ಗುರುಗಳು ಹಾಗೂ ಎಸ್ಡಿಎಂಸಿ ಅಧ್ಯಕ್ಷ ಭೀಮಾಶಂಕರ ಕಾಂಬಳೆ ಮತ್ತು ಶಿಕ್ಷಕ ವೃಂದದವರು ಇದ್ದರು.
“ಬಡ ಮಕ್ಕಳ ಹಿತದೃಷ್ಠಿಯಿಂದ ದಾನಿಗಳು ನೀಡಿದ ಸಿಸಿ ಕ್ಯಾಮರ್ ದೇಣಿಗೆಯನ್ನು ಸದ್ಬಳಕೆ ಮಾಡಿಕೊಳ್ಳದೆ ಮತ್ತು ಕೆಲವರಿಂದ ಸಿಸಿ ಅಳವಡಿಕೆಗೆಯೇ ವಿರೋದವಾಗಿದೆ, ಸಿಸಿ ಕ್ಯಾಮರ್ ಕನೇಕ್ಷನ ಮಾಡಿದ್ದರೆ ಈ ಕಳ್ಳತನ ವಾಗುತ್ತಿರಲಿಲ್ಲ”.-ಭೀಮಾಶಂಕರ ಕಾಂಬಳೆ ಅಧ್ಯಕ್ಷರು ಎಸ್ಡಿಎಂಸಿ.
“ಈ ಹಿಂದೆ ಕೂಡ ಕೋಣೆಯ ಬಾಗಿಲು, ಕಿಟಕಿಗಳನ್ನು ಮುರಿದು ಸರಾಯಿ ಬಾಟಲ್ ಗಳನ್ನ ಎಸೆದು, ರಾಷ್ಟ್ರ ನಾಯಕರ ಭಾವಚಿತ್ರಗಳನ್ನ ವಿರೂಪಗೊಳಿಸಿದ್ದರು, ಶಾಲೆಯ ನಲಿ ಕಲಿ ರೂಂ ನಲ್ಲಿಯ ಪುಸ್ತಕ ಸಾಮಗ್ರಿಗಳನ್ನು ಸುಟ್ಟು ಹಾಕಲಾಗಿತ್ತು, 2024ರಲ್ಲಿ 2 ಬಾರಿ, 25 ರಲ್ಲಿ 2 ಬಾರಿ ಹಂತ ಹಂತವಾಗಿ ಕಳ್ಳತನವಾಗಿವೆ ಹಾಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇಲ್ಲಿಯವರೆಗೂ ಕಳ್ಳರನ್ನು ಪತ್ತೆ ಮಾಡಿಲ್ಲ, ಹಲವಾರು ಬಾರಿ ಈ ಶಾಲೆಯನ್ನೇ ಟಾರ್ಗೆಟ್ ಮಾಡುತ್ತಿರುವ ಮರ್ಮ ಗೊತ್ತಾಗುತ್ತಿಲ್ಲ”?
