ಸ್ಟೇಷನ್ ತಾಂಡಾದ 25ನೇ ವರ್ಷದ ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ | ಹಣಮಂತ ಲಮಾಣಿ ಹಾಡಿಗೆ ಜನತೆ ಫಿದಾ, ಬಂಜಾರ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹಳ ಅವಶ್ಯಕ: ಜೇಮಸಿಂಗ್ ಮಹಾರಾಜ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಂಜಾರ ಸಮಾಜ ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಶಿಕ್ಷಣ ಪಡೆಯುವುದು ಬಹಳ ಅವಶ್ಯಕ ಎಂದು ಮುಗುಳನಾಗಾಂವ ಶ್ರೀ ಜೇಮಸಿಂಗ್ ಮಹಾರಾಜ್ ನುಡಿದರು.
ಪಟ್ಟಣದ ಸ್ಟೇಷನ್ ತಾಂಡಾದ ಸಮುದಾಯ ಭವನದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ 25ನೇ ವರ್ಷದ ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಂಜಾರ ಸಮಾಜ ಜಾಗೃತಿ ಆಗಬೇಕಾದರೆ ಎಲ್ಲರೂ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು ಎಂದು ಹೇಳಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಬಂಜಾರ ಸಮಾಜದ ಯುವಕರು ಜಾಗೃತಿಯಾಗಿದ್ದಾರೆ, ಪಾಲಕರು ಸಹ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಹೀಗಾಗಿ ಸರ್ಕಾರಿ ಅಧಿಕಾರಿಗಳಾಗಿ, ನೌಕರರಾಗಿ ಹೊರ ಬರುತ್ತಿದ್ದಾರೆ ಇದು ಬೆಳವಣಿಗೆಯ ಸಂಕೇತ. ಹಿಂದಿನ ತಾಂಡಾಗಳು ಈಗಿಲ್ಲ ಎಲ್ಲರೂ ಬದಲಾವಣೆ ಆಗಿದ್ದಾರೆ ಎಂದು ಹೇಳಿದರು. ಎಲ್ಲರೂ ಒಗ್ಗಟ್ಟು ಆಗಿದ್ದರಿಂದಲೇ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ ಎಂದರು. ಇದೇ ಸಂದರ್ಭದಲ್ಲಿ ದಿ.ಗೋವಿಂದ ಚವ್ಹಾಣ ಹಾಗೂ ರಾಮದಾಸ್ ಚವ್ಹಾಣ ಅವರನ್ನು ನೆನಪಿಸಿದರು.
ತರಿತಾಂಡಾದ ಅನೀಲ್ ಸಾಹೇಬ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಅದಾನಿ ಸಿಮೆಂಟ್ ಮುಖ್ಯಸ್ಥ ಅಜಯ್ ಶರ್ಮಾ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಪಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಸುರೇಶ್ ರಾಠೋಡ, ಡಾ. ಫಾರುಕ್ ಮನ್ನೂರ್, ಶಾಮ್ ಅವರು ಮಾತನಾಡಿದರು.
ಹಣಮಂತ ಲಮಾಣಿ ಹಾಡಿಗೆ ಜನತೆ ಫಿದಾ:
ಸರಿಗಮಪ ಹಾಗೂ ಬಿಗ್ ಬಾಸ್ ವಿನ್ನರ್ ಖ್ಯಾತ ಕಲಾವಿದ ಹನುಮಂತ ಲಂಬಾಣಿ ಜಾನಪದ ಹಾಡುಗಳಿಗೆ ಜನತೆ ಫಿದಾಗೊಂಡರು. ಹಣಮಂತ ಅವರ ತಂಡ ಜನರನ್ನು ರಂಜಿಸಿದರು. ತಡರಾತ್ರಿ ಯಾದರೂ ಸಹ ಜನರು ಸ್ಥಳ ಬಿಟ್ಟು ಕದಲದೆ ಉತ್ಸಾಹದಿಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾವಿದರಿಗೆ ಪ್ರೋತ್ಸಾಹ ನೀಡಿದರು.
ಜಿಪಂ ಮಾಜಿ ಸದಸ್ಯ ಅರವಿಂದ್ ಚವ್ಹಾಣ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಸದಸ್ಯರಾದ ವಿನೋದ್ ಗುತೆದಾರ, ನಾಗರಾಜ ಭಂಕಲಗಿ, ವಿಠಲ್ ಜಾಧವ, ರವಿ ಸೌಕಾರ್ ಮಳಖೇಡ, ನಿಂಗನಗೌಡ ಬೆಳ್ಳಿ, ಶಾಮ್ ನರ್ಸಿಂಗ್ ಚವ್ಹಾಣ, ಅನಿಲ್ ಬಿ ರಾಠೋಡ, ತಿರುಪತಿ ಚವ್ಹಾಣ, ದೇವಿದಾಸ ಚವ್ಹಾಣ, ನಾಮದೇವ ರಾಠೋಡ, ಚಂದು ಜಾಧವ, ಶಾಮ್ ಪವಾರ, ರಮೇಶ್ ಕಾರಭಾರಿ, ಪ್ರವೀಣ್ ಪವಾರ, ರಾಕೇಶ್ ಪವಾರ, ವಿಶ್ವನಾಥ್ ರಾಠೋಡ, ಹರೀಶ್ ರಾಠೋಡ, ಆರ್’ಟಿಒ ಅಧಿಕಾರಿ ಯಾದಗಿರಿ, ರಾಜು ರೇವು ಚವ್ಹಾಣ, ರಾಜು ರೂಮ್ಯಾ ರಾಠೋಡ, ಸುನೀಲ್ ರಾಠೋಡ, ಬಾಹರಪೇಟ್, ಜಗದೀಶ್ ರಾಠೋಡ, ಕುಮಾರ್ ಚವ್ಹಾಣ, ನವರಾತ್ರಿ ಉತ್ಸವ ಸಮಿತಿಯ ಸರ್ವ ಸದಸ್ಯರು ಸ್ಟೇಷನ್ ತಾಂಡಾದ 8 ನಾಯಕರು, ಯುವಕರು, ತಾಯಂದಿರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗೋಪಾಲ್ ಡಿ ರಾಥೋಡ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿನೋದ ಪವಾರ ಸ್ವಾಗತಿಸಿದರು, ಜಗದೀಶ್ ಚವ್ಹಾಣ, ನರಸಪ್ಪ ಚಿನ್ನಾಕಟ್ಟಿ ಅವರು ನಿರೂಪಿಸಿದರು, ಚಂದರ್ ಚವ್ಹಾಣ ವಂದಿಸಿದರು.

