ತಾಲೂಕು ಆಡಳಿತದ ಮುನ್ನೆಚ್ಚರಿಕೆ ಲೆಕ್ಕಿಸದ ದನಗಾಹಿ, ಬಳವಡಗಿ ಗ್ರಾಮದಲ್ಲಿ ಪ್ರವಾಹ ನೀರಿನಲ್ಲಿ ಜಾನುವಾರುಗಳ ಸಂಚಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಹಾಗೂ ಭೀಮಾ ಮತ್ತು ಕಾಗಿಣಾ ನದಿಯ ಪ್ರವಾಹದಿಂದ ಅನೇಕ ಹಳ್ಳಿಗಳು ಸಿಲುಕಿಕೊಂಡಿವೆ ನದಿ, ಹಳ್ಳ ಕೊಳ್ಳ ಹತ್ತಿರ ಜನರು ಹೋಗದಂತೆ ಹಾಗೂ ಜಾನುವಾರುಗಳನ್ನು ಬೀಡದಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಎಷ್ಟೇ ಮುನ್ನೆಚ್ಚರಿಕೆ ನೀಡಿದರೂ ಮತ್ತು ಸ್ಥಳೀಯ ಪಂಚಾಯತ್ ವತಿಯಿಂದ ಡಂಗೂರ ಸಾರಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದಕ್ಕೆ ಬಳವಡಗಿ ಗ್ರಾಮದಲ್ಲಿ ಪ್ರವಾಹ ನೀರು ಬ್ರಿಜ್ ಮೇಲೆ ರಭಸವಾಗಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ದನಗಾಹಿ ಒಬ್ಬ ಜಾನುವಾರುಗಳನ್ನು ಹೊಡೆದುಕೊಂಡು ಬರುತ್ತಿರುವ ದೃಶ್ಯ ಶನಿವಾರ ಕಂಡುಬಂತು.
ರೈತರು, ದನಕರುಗಳನ್ನು ಕಾಯುವವರು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಹೇಳುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಮುನ್ನೆಡೆಯಬೇಕಿದೆ. ಯಾವುದೇ ಹುಚ್ಚು ಸಾಹಸಕ್ಕೆ ಕೈಹಾಕದೆ, ಯಾವುದೇ ಜೀವ ಅಪಾಯ ಆಗದಂತೆ ಜಾಗೃತಿ ವಹಿಸಿ ಇನ್ನೊಬ್ಬರಿಗೂ ತಿಳಿಹೇಳುವ ಕೆಲಸ ಮಾಡಬೇಕು ಎಂಬುದು ನಾಗಾವಿ ಎಕ್ಸಪ್ರೆಸ್ ಕಳಕಳಿಯಾಗಿದೆ.

